ಟೋಲ್ ಟ್ಯಾಕ್ಸ್ ನಿಯಮದಲ್ಲಿ ಮಹತ್ವದ ಬದಲಾವಣೆ: ಏನಿದು ಹೊಸ ನಿಯಮ? ಇಲ್ಲಿದೆ ಮಾಹಿತಿ
ಕೇಂದ್ರ ಸರ್ಕಾರ ದೇಶದ ಎಲ್ಲಾ ಹೆದ್ದಾರಿಗಳಲ್ಲಿ ಸುಧಾರಿತ ಟೋಲ್ ನೀತಿ ಜಾರಿಗೆ ತಂದಿದೆ. ಈ ಹೊಸ ವ್ಯವಸ್ಥೆ ಪ್ರಯಾಣಿಕರಿಗೆ ಹೆಚ್ಚು ಪಾರದರ್ಶಕತೆ, ಸೌಲಭ್ಯ ಮತ್ತು ಉಳಿತಾಯ ನೀಡಲಿದೆ. ಮುಖ್ಯ ಬದಲಾವಣೆ? ಈಗ ಟೋಲ್ ಶುಲ್ಕವನ್ನು ನೀವು ಪ್ರಯಾಣಿಸಿದ ದೂರದ ಅನುಸಾರವೇ ಪಾವತಿಸಬೇಕು!
ಹೊಸ ವ್ಯವಸ್ಥೆಯ ಮುಖ್ಯ ಅಂಶಗಳು
1. ದೂರ-ಆಧಾರಿತ ಶುಲ್ಕ
ನೀವು ಹೆದ್ದಾರಿಯಲ್ಲಿ ಕೇವಲ 10 ಕಿ.ಮೀ. ಪ್ರಯಾಣಿಸಿದರೆ, 10 ಕಿ.ಮೀ.ಗೆ ಅನುಗುಣವಾದ ಶುಲ್ಕ ಮಾತ್ರ ಪಾವತಿಸಬೇಕು. ಹಿಂದಿನಂತೆ “ಸಂಪೂರ್ಣ ಶುಲ್ಕ” ಪಾವತಿಸುವ ಕಿರುಕುಳ ಇನ್ನು ಮುಂದೆ ಇರುವುದಿಲ್ಲ!
2. ನಗದು ರಹಿತ ವ್ಯವಸ್ಥೆ
ಟೋಲ್ ಶುಲ್ಕ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಯಿಂದ ಕಡಿತಗೊಳ್ಳುತ್ತದೆ (FASTag ಮೂಲಕ). ಹೊಸ ಆಟೋಮ್ಯಾಟಿಕ್ ಕ್ಯಾಮೆರಾಗಳು (ANPR ತಂತ್ರಜ್ಞಾನ) ವಾಹನದ ನಂಬರ್ ಪ್ಲೇಟ್ ಸ್ಕ್ಯಾನ್ ಮಾಡಿ, ಶುಲ್ಕ ವಸೂಲಿ ಮಾಡುತ್ತವೆ.
3. ಟೋಲ್ ಫ್ಲಾಜಾಗಳಲ್ಲಿ ಸುಗುಮ
ಟೋಲ್ ಫ್ಲಾಜಾಗಳಲ್ಲಿ ಗಂಟೆಗಟ್ಟಲೆ ಕಾಯುವುದು, ನಗದು ವಿವಾದಗಳು ಅಥವಾ ಟೋಲ್ ಕಳ್ಳತನ ಸಂಪೂರ್ಣವಾಗಿ ತೊಲಗಿಹೋಗುತ್ತದೆ. ಇದರಿಂದ ಇಂಧನ ವ್ಯಯ, ಸಮಯ ನಷ್ಟ ಮತ್ತು ಒತ್ತಡವೂ ಕಡಿಮೆಯಾಗುತ್ತದೆ.
ಇದನ್ನೂ ಓದಿರಿ: ಬ್ಯಾಂಕ್ ವಶಪಡಿಸಿಕೊಂಡ ವಾಹನಗಳನ್ನು ಹರಾಜಿನಲ್ಲಿ ಖರೀದಿಸುವುದು ಹೇಗೆ? ಇಲ್ಲಿದೆ ಮಾಹಿತಿ
ಒಟ್ಟಾರೆಯಾಗಿ ಕಡಿಮೆ ದೂರ ಪ್ರಯಾಣಿಸುವವರಿಗೆ ಕಡಿಮೆ ಶುಲ್ಕ ಹಾಗು ವಾಹನಗಳು ಟೋಲ್ ಪ್ಲಾಜಾಗಳಲ್ಲಿ ಗಂಟೆಗಟ್ಟಲೇ ಕಾಯಬೇಕಾಗಿಲ್ಲ. ಜೊತೆಗೆ 100% ಪಾರದರ್ಶಕತೆಯಂತೆ ಪ್ರತಿ ಟ್ರಾನ್ಸ್ಯಾಕ್ಷನ್ ಡಿಜಿಟಲ್ ರೆಕಾರ್ಡ್ ಆಗುತ್ತದೆ.
ಅಂದಾಜು 7-10 ದಿನಗಳಲ್ಲಿ ಈ ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿದೆ. ಹೊಸ ಟೋಲ್ ನೀತಿ ದೇಶದ ಹೆದ್ದಾರಿ ಪ್ರಯಾಣವನ್ನು ವೇಗವಾಗಿ, ಅಗ್ಗವಾಗಿ ಮತ್ತು ಹೆಚ್ಚು ಅನುಕೂಲಕರವಾಗಿ ಮಾಡಲಿದೆ ಎಂದು ಪರಿವಹನ ಸಚಿವಾಲಯ ನಿರೀಕ್ಷಿಸಿದೆ.

ಅಭಿಷೇಕ್ ಗೌಡ ರವರು ಕಂಟೆಂಟ್ ಕ್ರಿಯೇಷನ್ ನಲ್ಲಿ ಬಹಳ ವರ್ಷಗಳ ಅನುಭವ ಹೊಂದಿದ್ದು, ಸುಮಾರು 5 ವರ್ಷಗಳಿಂದ ಹಲವು ವೆಬ್ಸೈಟ್ ಗಳಿಗೆ ಆರ್ಟಿಕಲ್ ಅನ್ನು ಬರಿದಿದ್ದಾರೆ. ಇವರು ಹೆಚ್ಚಾಗಿ, ಟೆಕ್ನಾಲಜಿಗೆ ಸಂಭಂದಿಸಿದ ವಿಷಯದ ಬಗ್ಗೆ ಬರೆಯಲು ಆಸಕ್ತಿ ಹೊಂದಿರುತ್ತಾರೆ.